
ಸತೀಶ್ ನೀನಾಸಂ ಮತ್ತು ಡಿಂಪಲ್ ಕ್ವೀನ್ ರಚಿತಾ ರಾಮ್ ಅವರ ಸಕ್ಸಸ್ ಫುಲ್ ಸಿನಿಮಾ ಅಯೋಗ್ಯದ ಸೀಕ್ವೆಲ್ ಅಯೋಗ್ಯ 2 ಕಳೆದ ನವೆಂಬರ್ ನಲ್ಲಿ ಸೆಟ್ಟೇರಿ ಸಖತ್ ಸುದ್ದಿ ಆಗಿತ್ತು.
ಅಯೋಗ್ಯ 2 ಚಿತ್ರೀಕರಣ ಭರದಿಂದ ಸಾಗಿದ್ದು , ಇತ್ತೀಚೆಗೆ ಇಂಟ್ರೊಡಕ್ಷನ್ ಮಾಸ್ ಫೈಟ್ ಮುಗಿಸಿರುವುದಾಗಿ ಚಿತ್ರ ತಂಡ ತಿಳಿಸಿದೆ.
ಮುನೇಗೌಡ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ಈ ಸಿನಿಮಾ ಮೇಲೆ ಚಿತ್ರ ರಸಿಕರು ಭಾರಿ ನಿರೀಕ್ಷೆ ಇಟ್ಟಿರುವುದಂತು ಸುಳ್ಳಲ್ಲ…
ಗ್ರಾಮ ಪಂಚಾಯಿತಿ ಮೆಂಬರ್ ಆಗಿ ಜನರ ಮನ ಗೆದ್ದಿದ್ದ ನೀನಾಸಂ ಸತೀಶ್ ಈ ಚಿತ್ರದ ಮೂಲಕ ಮತ್ತೊಮ್ಮೆ ದೊಡ್ಡ ಹಿಟ್ ಕೊಡಲು ಸಿದ್ಧರಾಗಿದ್ದಾರೆ…
ನಿರ್ದೇಶಕ ಮಹೇಶ್ ಅವರು ಅಯೋಗ್ಯ 2 ಮೂಲಕ ಮತ್ತೊಂದು ಬ್ಲಾಕ್ ಬಸ್ಟರ್ ಕೊಡುವತ್ತ ಗಮನ ಹರಿಸಿದ್ದಾರೆ.