
ಕಳೆದ ಕೆಲವು ದಿನಗಳ ಹಿಂದೆ ದುಬೈನಲ್ಲಿ ಭುವನಂ ಗಗನಂ ಚಿತ್ರವನ್ನು ಸ್ಪೆಷಲ್ ಪ್ರೀಮಿಯರ್ ಶೋ ಮಾಡಲಾಗಿತ್ತು. ದುಬೈ ನಲ್ಲಿ ನಡೆದ ಮೊದಲ ವಿಶೇಷ ಪ್ರದರ್ಶನದಲ್ಲಿ ಹೌಸ್ಫುಲ್ ಪ್ರದರ್ಶನ ಕಂಡಿದೆ.
ಹಾಗು ದುಬೈನಲ್ಲಿ ನೆಲಸಿರುವ ಕನ್ನಡದ ಪ್ರೇಕ್ಷಕರಿಂದ ಕುಟುಂಬ ಸಮೇತ ನೋಡಬಹುದಾದ ಅದ್ಬುತ ಚಿತ್ರವೆಂದು ಪ್ರಾಮಾಣಿಕ ವಿಮರ್ಶೆ ಪಡೆದಿದ್ದು ಸಂತೋಷ ಮೂಡಿಸಿದೆ..
ಮುನೇಗೌಡರ ನಿರ್ಮಾಣದಲ್ಲಿ ಮೂಡಿಬಂದಿರುವ ಭುವನಂ ಗಗನಂ ಚಿತ್ರದಲ್ಲಿ ಪೃಥ್ವಿ ಅಂಬರ್ ಮತ್ತು ಪ್ರಮೋದ್ ಮುಖ್ಯ ಭೂಮಿಯಲ್ಲಿ ಕಾಣಿಸಿಕೊಂಡಿದ್ದಾರೆ. ರೋಮ್ಯಾಂಟಿಕ್ ಸಿನಿಮಾ ಇದಾಗಿದ್ದು ಕನ್ನಡದ ಪ್ರೇಕ್ಷಕರು ಬಾರಿ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಗಿರೀಶ್ ಮೂಲಿಮನೆ ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಚಿತ್ರಕ್ಕೆ ಚಿತ್ರರಸಿಕರು ಕಾದು ಕುಳಿತಿದ್ದಾರೆ.
ಚಿತ್ರತಂಡವು ದುಬೈ ಕನ್ನಡಿಗರಿಗೆ ಶತಕೋಟಿ ಧನ್ಯವಾದಗಳನ್ನು ತಿಳಿಸಿದೆ .